Kempu Mudiya Hennu : Novel

Kempu Mudiya Hennu : Novel

Brand: BEETLE BOOK SHOP
225.00 INR In stock Buy at Merchant

ಒರ್ಹಾನ್ ಪಮುಕ್ ಒಬ್ಬ ನಿಪುಣ ಕತೆಗಾರ ಆತನ ಕತೆಗಳಲ್ಲಿ ಕತಾ ನಿರೂಪಣಾ ಶೈಲಿಯಷ್ಟೇ ಕುತೂಹಲಕಾರಿಯಾದ ವಿಚಾರಗಳು ತುಂಬಿರುತ್ತವೆ. ತನ್ನ ಕತೆಗಳಲ್ಲಿ ಪೂರ್ವ ಮತ್ತು ಪಶ್ಚಿಮದ ಸಂಸ್ಕೃತಿಗಳ ತಿಕ್ಕಾಟ, ಮನುಷ್ಯ ಸಂಬಂಧಗಳ ಜಟಿಲತೆ. ಆಧುನಿಕತೆ ಜೊತೆಗೆ ಪರಂಪರೆಯ ಪ್ರಶ್ನೆಗಳಿರುತ್ತವೆ. ವಾಸ್ತವವಾದಿಯಾಗಿ ಕತೆ ನಿರೂಪಿಸುವಾಗಲೂ ಚರಿತ್ರೆ, ಪುರಾಣ, ರಾಜಕೀಯದ ಆಯಾಮಗಳೂ ಸೇರಿಕೊಳ್ಳುತ್ತವೆ. ನಿತ್ಯದ ಬದುಕಿನಲ್ಲಿ ಇದ್ದೂ ನಾವು ಗಮನಿಸದ ವಸ್ತುಗಳ ಅರ್ಥಪೂರ್ಣ ವರ್ಣನೆ ಇರುತ್ತದೆ. ಆತನ ಮಿಕ್ಕ ಕೃತಿಗಳಂತೆ `ಕೆಂಪು ಮುಡಿಯ ಹೆಣ್ಣು’ ಕಾದಂಬರಿಯಲ್ಲೂ ಇಸ್ತಾಂಬುಲ್ ನಗರದ ವಾಸ್ತವ ವರ್ಣನೆ ಇದೆ. ಆದರೆ ರಸ್ತೆ, ಚೌಕ, ಮೊಹಲ್ಲ ಇತ್ಯಾದಿಗಳೆಲ್ಲ ಕತೆ ಓದುವಾಗಲೇ ಸ್ಪಷ್ಟವಾಗುತ್ತದೆ. ಆ ನಗರವನ್ನು ಬಲ್ಲವರಿಗೆ ಕತೆಯ ಭಾವಕ್ಕೂ ಊರಿನ ವಾಸ್ತವಕ್ಕೂ ಇರುವ ಸಂಬಂಧ ಹೊಸಕೋನದಿಂದ ಕಾಣುತ್ತದೆ. ಆದರೆ ಅವೆಲ್ಲ ವಿವರಗಳನ್ನೂ ಅನುಬಂಧದಲ್ಲಿ ನೀಡಿದರೆ ಓದಿನ ಸುಖಕ್ಕೆ ಅಡ್ಡಿಯಾದೀತು ಎಂದು ನೀಡಿಲ್ಲ. ಪಮುಕ್ನ ವಿಷಯ ವ್ಯಾಪ್ತಿಯ ಸೂಚನೆ ಒಂದಿಷ್ಟು ಸಿಗಲೆಂದು ಈ ಕಾದಂಬರಿಯಲ್ಲಿ ಉಲ್ಲೇಖಗೊಂಡಿರುವ ಚಾರಿತ್ರಿಕ ವ್ಯಕ್ತಿ, ಸಂದರ್ಭ, ಸಾಹಿತ್ಯ ಕೃತಿ ಮತ್ತು ಕಲಾವಿದರನ್ನು ಕುರಿತ ಅತ್ಯಂತ ಕಿರಿದಾದ ಟಿಪ್ಪಣಿಯನ್ನು ಅನುಬಂಧದಲ್ಲಿ ನೀಡಲಾಗಿದೆ. ಹಾಗೆಯೇ ವಿವಿಧ ಸಂದರ್ಶನಗಳಲ್ಲಿ ಆತ ಕಾದಂಬರಿ ಕಲೆಯ ಬಗ್ಗೆ ಹೇಳಿರುವ ಮಾತುಗಳ ಸಾರಾಂಶವನ್ನು, ಈ ಕಾದಂಬರಿ ಕುರಿತ ಕೆಲವು ಕುತೂಹಲದ ಸಂಗತಿಗಳನ್ನು ಅನುಬಂಧದಲ್ಲಿ ಸೇರಿಸಲಾಗಿದೆ. ಸಾಹಿತ್ಯದಲ್ಲಿ ಗಂಭೀರ ಆಸಕ್ತಿ ಉಳ್ಳವರಿಗೆ ಇದು ನೆರವಾಗುತ್ತದೆ ಎನ್ನುತ್ತಾರೆ ಅನುವಾದಕ ಓ.ಎಲ್. ನಾಗಭೂಷಣಸ್ವಾಮಿ.

Variants (1)
  • Default Title — 225.00 INR — In stock

AI Readiness

Good foundation, but some important product data is still missing.

77%