ಕಾದಲ್ ಕತೆಗಳು
ಕಾಡಿನ ನಡುವಿನ ಹಾದಿಯಂತೆ ನಿಗೂಢ,ಕಾವೇರಿಯ ನೀರಂತೆ ಸಹಜ - ಇದು 'ಕಾದಲ್ ಕಥೆಗಳು', ಡಿಜಿಟಲ್ ಲೋಕದ ಭ್ರಮೆಯಿಂದ ಅನಲಾಗ್ ಪ್ರಪಂಚದ ಸತ್ಯದವರೆಗೆ ಸಾಗುವ ಇಲ್ಲಿನ ಪಾತ್ರಗಳು ಪ್ರೀತಿಯ ಹೊಸ ಆಯಾಮವನ್ನು ಅನಾವರಣಗೊಳಿಸುತ್ತವೆ. ಇದು ಇಂದಿನ ಕಾಂಕ್ರೀಟ್ ಕಾಡಿನ ನಡುವೆ ಉಸಿರಾಡುವ ಅಪ್ಪಟ ಅರ್ಬನ್ ಪ್ರೇಮಲೋಕ. ತಂತ್ರಜ್ಞಾನದ ಭರಾಟೆ, ಮೆಟ್ರಿಕ್ಸ್ಗಳ ನಡುವೆ ಕಳೆದುಹೋಗುತ್ತಿರುವ ಇಂದಿನ ತಲೆಮಾರಿನ ನವಿರಾದ ಪ್ರೇಮಕಥೆಗಳು ಇಲ್ಲಿವೆ. 'ಕಾದಲ್' ಎಂಬುದು ಕೇವಲ ತಮಿಳು ಪದವಲ್ಲ ಅದು ಅಪ್ಪಟ ಹಳಗನ್ನಡದ ಪದ ಕೂಡ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾದಲ್ ಎಂದರೆ 'ತೀವ್ರವಾದ ಪ್ರೀತಿ, ಆಳವಾದ ಅನುರಾಗ ಅಥವಾ ಮೋಹ' ಎಂದರ್ಥ. ಕವಿರಾಜಮಾರ್ಗ ಪಂಪಭಾರತದ ಕಾಲದಿಂದಲೂ ಈ ಪದವು ಕನ್ನಡದ ಮಣ್ಣಿನಲ್ಲೇ ಹಾಸುಹೊಕ್ಕಾಗಿದೆ. ಅತಿಯಾದ ಪ್ರೀತಿಯಿಂದ ಹುಟ್ಟುವ ಹಂಬಲವೇ 'ಕಾದಲ್'. ಅತಿಯಾದ ಪ್ರೀತಿಯಿಂದ ಹುಟ್ಟುವ ಹಂಬಲವೇ 'ಕಾದಲ್'. ಇಂದಿನ ಇನ್ಸ್ಟಾಗ್ರಾಮ್ ಲೈಕುಗಳು, ಡೇಟಿಂಗ ಆಪ್ ಸ್ವೈಪುಗಳು, ವಾಟ್ಸಪ್ ಸ್ಟೇಟಸ್ಗಳ ಡಿಜಿಟಲ್ ಭ್ರಮೆಯ ನಡುವೆ ನಾವಿಂದು ಕಳೆದುಕೊಳ್ಳುತ್ತಿರುವುದು ಇದೇ 'ಕಾದಲ್' ಎಂಬ ಅಪ್ಪಟ ಆಳವಾದ ಭಾವನೆಯನ್ನು ಮನುಷ್ಯ ನಿರಂತರ ಹುಡುಕಾಡುತ್ತಿರುವುದು ಇಕನ್ನೇ. ಬೆರಳ ತುದಿಯಲ್ಲೇ ಇಡೀ ಪ್ರಪಂಚ ಸಿಗುವ, ಒಂಟಿತನವನ್ನು ಕರಗಿಸಲು ನೂರಾರು ಪರ್ಯಾಯಗಳಿರುವ ಈ ಫಾರ್ವರ್ಡ್ ಜನರೇಷನ್ನಲ್ಲೂ ಒಬ್ಬ ಗಂಡು ಅಥವಾ ಹೆಣ್ಣು ಇಂದಿಗೂ ಪ್ರೀತಿಗಾಗಿ ಹಂಬಲಿಸುವುದೇಕೆಂದರೆ, ಸೌಕರ್ಯಗಳು ಬದುಕನ್ನು ಸುಲಭವಾಗಿಸಬಹುದೇ ಹೊರತು ಸಾರ್ಥಕಗೊಳಿಸಲಾರವು. ಇಂದಿನ ಕಾಲದಲ್ಲಿ ಎಲ್ಲವೂ ಇನ್ಸ್ಟಂಟ್ ಆಗಿ ಸಿಗುತ್ತದೆ, ಆದರೆ ಹೃದಯ ಬಯಸುವ ಆ ಸ್ಥಿರತೆ ಎಲ್ಲಿಯೂ ಸಿಗುತ್ತಿಲ್ಲ. ಅದಕ್ಕಾಗಿಯೇ ಪ್ರೀತಿಯನ್ನು ಹುಡುಕುವುದು, ಕಂಡುಕೊಳ್ಳುವ ಕೆಲಸ ಮನುಷ್ಯ ಮಾಡುತ್ತಿದ್ದಾನೆ. ಇದು ನಮ್ಮನ್ನು ಯಾಂತ್ರಿಕ ರೋಬೋಟ್ಗಳಾಗದಂತೆ ತಡೆಯುವ ಕೊನೆಯ ಕೊಂಡಿ. ಈ ಕಥೆಗಳಲ್ಲಿ ಆ ಕೊಂಡಿಯನ್ನೇ ಹುಡುಕುವ ಪ್ರಯತ್ನ ಮಾಡಿದ್ದೇನೆ.
Variants (1)
- Default Title — 160.00 INR — In stock
AI Readiness
Good foundation, but some important product data is still missing.