ಕಥಾ ಸಂಭ್ರಮ

ಕಥಾ ಸಂಭ್ರಮ

Brand: Prakash Nayak
SKU: HB00005505
200.00 INR In stock Buy at Merchant

ಕಥೆಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು, ಕಥೆಯನ್ನು ಹೇಳದವರಾಗಲೀ, ಕೇಳಿದವರಾಗಲೀ ಇಲ್ಲ. ಸುಳ್ಳುಮುಟ್ಟುವ ಅತುರದಲ್ಲಿ, ಇಂಪ್ರೆಷನ್ ಹುಟ್ಟುಹಾಕುವ ಉತ್ಸಾಹದಲ್ಲಿ, ಕೇಳುಗನಲ್ಲಿ ಆಸಕ್ತಿಹುಟ್ಟಿಸುವ ಗೀಚಿನಲ್ಲಿ ನಿಜಕ್ಕೂ ಇರುವುದು ಕಥೆಯನ್ನು ಹರಿಬಿಡುವ ಕ್ರಿಯಾಶೀಲತೆಯೇ, ಅರಿತೋ, ಅರಿಯದೆಯೋ ಹುಟ್ಟಿಕೊಳ್ಳುವ ಕಡೆ, ನಿರಾಕಾರ ಸತ್ಯಕ್ಕೆ ಒಂದು ರೂಪಕೊಟ್ಟು ಆ ಕ್ಷಣ ಆ ರೂಪವೇ ಸತ್ಯವೆನ್ನುವ ಭ್ರಮೆ ಹುಟ್ಟಿಸಿ ಹೊಸದೊಂದು ಅನುಭವವನ್ನು ಹುಟ್ಟಿಸಿಬಿಡುತ್ತದೆ. ಕಥೆ ಅಂದೊಡನೆ ಮೊದಲು ನೆನಪಾಗುವುದು ಅದರ ವಸ್ತು. ಕಥೆಗಾರನ ಮನಸ್ಸನ್ನು ಕಾಡಿ, ಬರೆಯುವಂತೆ ಬಲವಂತ ಮಾಡುವ ಸ್ಫೂರ್ತಿಯ ಸೆಲೆ ಇದು. ಮಾನವ ಸಂಬಂಧಗಳ ನಡುವಿನ ನಾಜೂಕು ಬಹಳ ಕಥೆಗಾರರನ್ನು ಸೆಳೆಯುವಂತೆಯೇ, ಇತಿಹಾಸದ ಕುರಿತ ಕುತೂಹಲ ಮತ್ತು ವಿಜ್ಞಾನದ ಸಾಧ್ಯತೆಗಳು ಇನ್ನಷ್ಟು ವೈವಿಧ್ಯತೆಯನ್ನು, ಮನಸ್ಸಿಗೆ ಖುಷಿಕೊಡುವುದರ ಜೊತೆಜೊತೆಯಲ್ಲೇ ನಮ್ಮ ಅರಿವಿನ ಗಡಿಯನ್ನು ವಿಸ್ತರಿಸಲು, ಕಲ್ಪನೆ ಗರಿಬಿಚ್ಚಲು ಸಹಾಯ ಮಾಡುತ್ತವೆ. ಕನ್ನಡ ಮುಖ್ಯವಾಹಿನಿಯನ್ನು ಶ್ರೀಮಂತಗೊಳಿಸುತ್ತಿರುವ ಹಲವು ಕ್ರಿಯಾಶೀಲ ಸೆಲೆಗಳನ್ನು ಈ ಸಂಕಲನ ಹೊಂದಿದೆಯೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅದನ್ನು ಇಲ್ಲಿನ ಕಥೆಗಳು ಬಿಂಬಿಸುತ್ತವೆ ಕೂಡ. ಸಣ್ಣ ಕಥೆಯ ಸಾಧ್ಯತೆಗಳ ಹರಹು, ಆಡುಭಾಷೆಗಳಲ್ಲಿನ ವೈವಿಧ್ಯ, ಕಥೆಗಾರರ ಅನುಭವ, ಪರಿಸರ ಬದಲಾದಂತೆ ಅವರನ್ನು ಕಾಡುವ ವಸ್ತುಗಳ ವೈವಿಧ್ಯ ಈ ಸಂಕಲನದಲ್ಲಿ ವ್ಯಕ್ತವಾಗಿದೆ ಎನ್ನುವುದು ಸಂತೋಷ ತರುವ ಸಂಗತಿ.

Variants (1)
  • Default Title — 200.00 INR — In stock

AI Readiness

Good foundation, but some important product data is still missing.

86%