Postman Ganganna ( Novel )

Postman Ganganna ( Novel )

Brand: BEETLE BOOK SHOP
117.00 INR In stock Buy at Merchant

ಎಂ. ಜವರಾಜ್ ನಮ್ಮ ತಾಲ್ಲೋಕಿನ ಮುಖ್ಯ ಬರಹಗಾರರಲ್ಲಿ ಒಬ್ಬರಾಗಿ ಹೊರಹೊಮ್ಮುತ್ತಿದ್ದಾರೆ. ಸ್ವಲ್ಪ ತಡವಾಗಿ ಬರಹಕ್ಕೆ ತೊಡಗಿಕೊಂಡಿರಬಹುದು. ಆದರೂ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸಮಾಡಿದ್ದಾರೆ. ಕವಿತೆ, ಕಥೆ, ಕಾದಂಬರಿ ಮತ್ತು ವಿಮರ್ಶೆಯಲ್ಲೂ ಕೈಯಾಡಿಸಿ ಗೆದ್ದಿದ್ದಾರೆ. ಪ್ರಸ್ತುತ ಒಂದು ಕಿರು ಕಾದಂಬರಿಯನ್ನು ಪ್ರಕಟಿಸುತ್ತಿದ್ದಾರೆ. 'ಪೋಸ್ಟ್ ಮ್ಯಾನ್ ಗಂಗಣ್ಣ' ಇವರ ಹಳ್ಳಿಯ ಆಸುಪಾಸಿನಲ್ಲಿ ನಡೆಯುವ ಕಥೆ. ಅದರ ಜೊತೆಗೆ ಇವರ ಬಾಲ್ಯವೂ ತಳುಕಿಹಾಕಿಕೊಂಡಿದೆ. ಆದ್ದರಿಂದ ಕಾದಂಬರಿ ಹೆಚ್ಚು ಆತ್ಮಕಥಾನಕವಾಗಿದೆ. ಒಬ್ಬ ನಿರ್ಗತಿಕ, ಮುಗ್ಧ ವ್ಯಕ್ತಿ ಗಂಗಶೆಟ್ಟಿ ಅನುಕಂಪ ಗಿಟ್ಟಿಸಿಕೊಂಡು ಪೋಸ್ಟ್ ಮ್ಯಾನ್ ಆಗಿ ಅಸ್ತಿತ್ವ ಪಡೆದುಕೊಳ್ಳುವುದು ಮತ್ತು ಹಳ್ಳಿಯ ಸಬ್ ಪೋಸ್ಟ್ ಆಫೀಸಿನ ಪಡಿಪಾಟಲುಗಳನ್ನು ಗಂಗಣ್ಣನ ಮೂಲಕ ಹೇಳುವುದು ಕಥೆಯ ಮುಖ್ಯಧಾರೆಯಾಗಿದೆ. ಅಂಚೆ ಇಲಾಖೆಯ ಒಳಹೊರಗನ್ನು ಲೇಖಕರು ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ ಎನ್ನಬಹುದು. ಟಿ. ನರಸೀಪುರದ ಸುತ್ತಲ ಆಡುಭಾಷೆಯನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಅಲ್ಲಲ್ಲಿ ತಮ್ಮ ಬಾಲ್ಯಕಾಲದ ಜೀವನ ಚಿತ್ರಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಥೆ ಹೆಚ್ಚು ಸಂಘರ್ಷಗಳಿಲ್ಲದೆ ಸಲಿಲವಾಗಿ ಓದಿಸಿಕೊಂಡು ಹೋಗುತ್ತದೆ. ಮುಖ್ಯವಾಗಿ ಒಂದು ಕಾಲಘಟ್ಟದ ಗ್ರಾಮೀಣ ಬದುಕಿಗೆ ಈ ಕಿರು ಕಾದಂಬರಿ ಕನ್ನಡಿ ಹಿಡಿದಂತಿದೆ. ಜವರಾಜ್ ಅವರು ಇನ್ನೂ ಹೆಚ್ಚು ಬರೆಯಲಿ ಎಂದು ಆಶಿಸುತ್ತಾ ಸದ್ಯದ ಈ ಕೃತಿಗೂ ಅವರ ಮುಂಬರುವ ಕೃತಿಗಳಿಗೂ ಯಶಸ್ಸನ್ನು ಹಾರೈಸುತ್ತೇನೆ. ಡಾ. ಮೂಡ್ನಾಕೂಡು ಚಿನ್ನಸ್ವಾಮಿ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು)

Variants (1)
  • Default Title — 117.00 INR — In stock

AI Readiness

Good foundation, but some important product data is still missing.

77%