ದಲಿತ ಪ್ಯಾಂಥರ್
ದಲಿತ ಸಾಹಿತ್ಯ ಚಳವಳಿಯ ಕೃತಿಶೀಲ ಮತ್ತು ಪ್ರಖರ ಆವಿಷ್ಕಾರವೆಂದರೆ, 1972ರಲ್ಲಿ ಉದಯಗೊಂಡ 'ದಲಿತ ಪ್ಯಾಂಥರ್", ಆಕ್ರಮಠ ಮತ್ತು ಉಗ್ರ ಭಾಷೆಯಲ್ಲಿ ಈ ಯುವಗುಂಪು ನಾಯಕತ್ವದ, ಹಿಂದೂ ಧರ್ಮ ಹಾಗೂ ರಾಜಕಾರಣಿಗಳ ವಿರುದ್ಧ ಟೀಕೆ ಮಾಡಲಾರಂಭಿಸಿತು. ಪ್ಯಾಂಥರವೂ ದಲಿತ ಸಮುದಾಯಕ್ಕೆ ಭರವಸೆ ನೀಡಿತು. ಎರಡು ಮೂರು ವರ್ಷಗಳಲ್ಲಿ ಪ್ಯಾಂಥರ್ ಒಡೆಯಿತು. ಇದಕ್ಕೆ ಕಾರಣವೇನೆಂದರೆ, ವ್ಯವಸ್ಥಿತ ರೀತಿಯಲ್ಲಿ ಸಂಘಟನೆಯನ್ನು ಕಟ್ಟಿರಲಿಲ್ಲ. ಅದು ಉದ್ರೇಕವಾಗಿತ್ತು. ಕಾರ್ಯಕರ್ತರಲ್ಲಿ ಶಿಸ್ತು ಇರಲಿಲ್ಲ. ಮಹತ್ವದ ಕಾರಣವೇನೆಂದರೆ, ವೈಚಾರಿಕತೆ ಹಾಗೂ ವ್ಯಕ್ತಿಗತ ಭಿನ್ನ ದೃಷ್ಟಿಯಿಡುವ ಇಬ್ಬರು ವ್ಯಕ್ತಿಗಳ ಕೈಯಲ್ಲಿ ಪ್ಯಾಂಥರ್ ನಾಯಕತ್ವವಿತ್ತು. ಆದರೂ ಈ ಪ್ಯಾಂಥರ್ ದಲಿತರಲ್ಲಿ ಸಾಮಾಜಿಕ ಅರಿವನ್ನು ಮೂಡಿಸಿದ್ದು ಮಾತ್ರ ಸುಳ್ಳಲ್ಲ. ಇದು ಅಂಬೇಡ್ಕರ್ ಪ್ರಣೀತ ಚಳವಳಿಯ ಮೂರನ ಪೀಳಿಗೆಯ ನಾಯಕತ್ವದ ಆಗಮನದ ಸುಳಿವು ನೀಡಿತು.
Variants (1)
- Default Title — 140.00 INR — In stock
AI Readiness
Good foundation, but some important product data is still missing.
82%