ಎಪ್ಪತ್ತರ ದಶಕದ ಕಥೆ
ನಮ್ಮ ಈಚಿನ ಇತಿಹಾಸದಲ್ಲಿ ಎಪ್ಪತ್ತರ ದಶಕದ ಬದುಕು ಒಂದು ವಿಶೇಷವಾದ, ಗಂಭೀರವಾದ ಪರಿಶೀಲನೆಗೆ ಒಳಗಾಗಬೇಕಾಗಿತ್ತು. ಸಮಾಜಶಾಸ್ತ್ರಜ್ಞರು ಈ ಬಗ್ಗೆ ಬರೆದಿರಬೇಕೆಂದು ಆಶಿಸುತ್ತೇನೆ. ಆದರೆ ಎಪ್ಪತ್ತರ ದಶಕದ ಕನಸುಗಳು ಪ್ರಜಾತಂತ್ರದ ವೈಫಲ್ಯ ಪುನಶ್ಚೇತನ ಇವೆಲ್ಲವನ್ನೂ ಒಳನೋಟದಿಂದ ನೋಡಬೇಕೆಂಬ ಲೇಖಕನ ಆಸೆಗಳು, ಈ ಕಥೆಗಳಲ್ಲಿ ಕಾಣಿಸಬಹುದು. ಯಾಕೆಂದರೆ ಈ ದಶಕ ನಾವು ಕನಸುಗಳನ್ನು ಕಂಡ ಕಾಲ ಕನಸುಗಳು ಭಗ್ನವಾದ ಕಾಲ. ಕ್ರಾಂತಿಕಾರರೆಂದು ಭಾವಿಸಿಕೊಂಡ ಮಧ್ಯಮವರ್ಗ ಬ್ಯಾಡ್ ಫೈತ್ನಲ್ಲಿ ಬದುಕಿದ ಕಾಲ. ಬ್ಯಾಡ್‌ಫೈತ್ ಲೇಖಕನೊಬ್ಬ ತನ್ನ ಹೊರೆಗೆ ಕಾಣುತ್ತಿರುವುದು ಮಾತ್ರವಲ್ಲ; ತನ್ನ ಒಳಗೂ ಕಾಣುತ್ತಿರುವುದು. ಗಾಂಧಿಯವರ ಮಾರ್ಗವನ್ನು ಪುನಶ್ಚೇತನಗೊಳಿಸಲು ಜಯಪ್ರಕಾಶ ನಾರಾಯಣರು ವಿಫಲರಾದರು. ರಾಜಕಾರಣದ ಜಾಗವನ್ನು ಪುಂಡುಪೋಕರಿಗಳು ಆಕ್ರಮಿಸಿದರು. ಸ್ವಜಾತಿಯ ಹೆಸರಲ್ಲಿ ಜಾತಿಯ ಕ್ರಾಂತಿಯನ್ನು ಮಾಡಿದರು. ಇಂಥ ಎಲ್ಲ ಸುಳ್ಳುಗಳು ನಮ್ಮನ್ನು ಈಗ ಒದ್ದು ಒದ್ದು ನೋಯಿಸುತ್ತಿವೆ. ಯು.ಆರ್. ಅನಂತಮೂರ್ತಿ (ಅರಿಕೆಯಿಂದ)
Variants (1)
- Default Title — 75.00 INR — In stock
How AI sees this product
The more complete this product's details, the more confidently AI assistants can understand and recommend it.