ಶಂ. ಬಾ. ಜೋಶಿ

ಶಂ. ಬಾ. ಜೋಶಿ

Brand: malleshwaram. j. venkatesh
SKU: HB00005509
75.00 INR In stock Buy at Merchant

'ಕರ್ಣಾಟ ಸಂಸ್ಕೃತಿಯ ಪೂರ್ವ ಪೀಠಿಕೆ' ಎಂಬ ತಮ್ಮ ಸಂಶೋಧನ ಗ್ರಂಥಕ್ಕಾಗಿ ೧೯೭೦ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಪಡೆದ ಶಂಕರ ಬಾಳದೀಕ್ಷಿತ ಜೋಶಿ (೧೮೯೬-೧೯೯೧) ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಕನ್ನಡ ಮತ್ತು ಮರಾಠಿ ಭಾಷೆಗಳ ವಿಷಯದಲ್ಲಿ ಆಳವಾದ ಪಾಂಡಿತ್ಯವನ್ನು ಗಳಿಸಿದ್ದು, 'ಕಣ್ಮರೆಯಾದ ಕನ್ನಡ', 'ಕನ್ನಡದ ನೆಲೆ' ಮುಂತಾದ ಕನ್ನಡ ಗ್ರಂಥಗಳಿಂದಲೂ, 'ಮಹಾರಾಷ್ಟ್ರದ ಮೂಲ', 'ಮರಾಟೀ ಸಂಸ್ಕೃತಿ: ಕೆಲವು ಸಮಸ್ಯೆಗಳು' ಮುಂತಾದ ಮರಾಠಿ ಗ್ರಂಥಗಳಿಂದಲೂ ಸಂಶೋಧನ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದರು. ಅವರ ತೀರ್ಮಾನಗಳು ಎಲ್ಲರಿಗೂ ಒಪ್ಪಿಗೆಯಾಗದೆ ಹೋಗಬಹುದಾದರೂ, ಸಂಶೋಧನೆಯ ಬಗೆಗಿನ ಮೂಲ ಕಾಳಜಿ ಹಾಗೂ ಕಲೆ ಹಾಗಿರುವ ಮಾಹಿತಿಯ ಸತ್ಯತೆಯನ್ನು ಯಾರೂ ಸಂದೇಹಿಸುವಂತಿಲ್ಲ. ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಪ್ರಕಟವಾಗಿರುವ 'ಋಗ್ವದ ಸಾರ : ನಾಗಪ್ರತಿಮಾ ವಿಚಾರ' ಎಂಬ ಗ್ರಂಥವೂ ಮೌಲಿಕ ಚಂತನೆಗಳನ್ನು ಒಳಗೊಂಡಿದೆ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರು ರಚಿಸಿದ್ದ ಲೇಖನಗಳನ್ನು ಮತ್ತು ಗ್ರಂಥಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಆರು ಸಂಪುಟಗಳಲ್ಲಿ ಪ್ರಕಟಿಸಿದೆ. ಉಭಯ ಭಾಷಾ ವಿದ್ವಾಂಸರೂ ಕನ್ನಡ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕುಲ ಸಚಿವರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಗಮನಾರ್ಹ ಸೇವೆ ಸಲ್ಲಿಸಿರುವಂಥವರೂ, ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಕರ್ತವ್ಯ ನಿರ್ವಹಿಸಿದವರೂ ಆದ ಪ್ರೊ|| ಮಲ್ಲೇಪುರಂ ಜಿ. ವೆಂಕಟೇಶ ಅವರು ಸಂಶೋಧನೆ, ಸಂಪಾದನೆ ಮತ್ತು ವಿಮರ್ಶೆಯ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಹಲವಾರು ಉತ್ತಮ ಗ್ರಂಥಗಳನ್ನು ರಚಿಸಿದ್ದಾರೆ. ಪ್ರಕಟಿಸಿದ್ದಾರೆ. ಶಂ. ಬಾ. ಜೋಶಿಯವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಸಂಪಾದಿಸಿ ಪ್ರಕಟಿಸಿರುವ ವೆಂಕಟೇಶ ಅವರು ಶಂ. ಬಾ. ಅವರನ್ನು ಕುರಿತ ಈ ಪರಿಚಯಾತ್ಮಕ ಕೃತಿಯನ್ನು ರಚಿಸಿಕೊಟ್ಟಿದ್ದಾರೆ.

Variants (1)
  • Default Title — 75.00 INR — In stock

AI Readiness

Good foundation, but some important product data is still missing.

86%