Nigala - Novel

Nigala - Novel

Brand: BEETLE BOOK SHOP
355.00 INR In stock Buy at Merchant

ಶಾರದಾ ಚೈತ್ರ ಅವರ ಈ ದೀರ್ಘ ಕಾದಂಬರಿಯನ್ನು ಓದಿ ನಾನು ಬೆರಗಾಗಿದ್ದೇನೆ. ಇದೊಂದು ಸುದೀರ್ಘ ಪಯಣದ ಕತೆ, ಸಂಸ್ಕಾರವಂತ ಕುಟುಂಬವೊಂದು ಅಮೆರಿಕೆಗೆ ವಲಸೆ ಬಂದು ನೆಲೆಸಿ ವಲಸೆ ಬದುಕನ್ನು ಕಟ್ಟಿಕೊಂಡು ಹೊಸ ದೇಶವನ್ನು, ಸಂಸ್ಕೃತಿಯನ್ನು ಅನುಭವಿಸುತ್ತಾ ಓದುಗರಿಗೂ ಕೂಡ ಹೊಸದೇಶದ ಗಾಢ ಅನುಭವವನ್ನು ಕೊಡುವುದು ಈ ಕೃತಿಯ ಹೆಚ್ಚುಗಾರಿಕೆ. ಶಾರದಾ ಅವರ ಹಲವು ತರದ ಆಸಕ್ತಿಗಳು ಇಲ್ಲಿ ಕಾದಂಬರಿ ರೂಪದಲ್ಲಿ ಮೂಡಿಬಂದಿವೆ. ಸಾಂಸಾರಿಕತೆ, ಅಧ್ಯಾತ್ಮ, ತತ್ತ್ವಶಾಸ್ತ್ರ ಜೆನೆಟಿಕ್ಸ್, ಜನಪ್ರಿಯ ಸಂಸ್ಕೃತಿ, ಧರ್ಮ, ಮಾನವಶಾಸ್ತ್ರ, ರಾಜಕೀಯ ಹೀಗೆ ಹಲವು ಹತ್ತು ವಿಷಯ ಗಳಲ್ಲಿನ ಆಸಕ್ತಿ, ಅದಕ್ಕೆ ಬೇಕಾದ ಹಸನಾದ ಓದು, ಓದಿನಿಂದ ದೊರಕಿದ ಜ್ಞಾನದ ಬೇಕುಬೇಡ ಗಳನ್ನು ನಿರ್ಧರಿಸುವ ವಿಚಕ್ಷಣಾ ಬುದ್ದಿ ಎಲ್ಲ ಸೇರಿ ಈ ಕಾದಂಬರಿ ರೂಪುಗೊಂಡಿದೆ, ಶಾರದಾ ಅವರು ಕಾದಂಬರಿಯಲ್ಲಿ 'ಪಾಲಿಮ್ಯಾನ್' ಎಂಬ ಪದವನ್ನು ಒಮ್ಮೆಗೂ ಹೆಚ್ಚು ಬಾರಿ ಬಳಸುತ್ತಾರೆ 'ಪಾಲಿಮ್ಯಾನ್' ಎಂದರೆ ಒಂದಕ್ಕಿಂತ ಹೆಚ್ಚಿನ ವಿಷಯವನ್ನು ಆಳವಾಗಿ ತಿಳಕೊಂಡವನು' ಎಂಬರ್ಥ. ಈ ಕಾದಂಬರಿಯ ಲೇಖಕಿಯಾಗಿ ಇವರ ಓದಿನ ಹರಹನ್ನು ನೋಡುತ್ತಿದ್ದರೆ ಈಕೆ ಕೂಡ ಸಾಲಿಮ್ಯಾಥ್ ಇರಬಹುದೇ ಎಂಬ ಅನುಮಾನ ಬರುತ್ತದೆ. ಆ ಈ ಕಾದಂಬರಿಯಲ್ಲಿ ನಡೆಯುವ ಮಾತುಕತೆಯಲ್ಲೊಮ್ಮೆ ಇಷ್ಟೆಲ್ಲ ತತ್ವಶಾಸ್ತ್ರ, ಸಾಹಿತ್ಯದ ಓದು ಮಹತ್ತರ ಕಾದಂಬರಿ ಬರೆಯುವುದಕ್ಕಾ ಎಂಬ ಪ್ರಶ್ನೆಯೊಂದು ಬರುತ್ತದೆ. ಅದಕ್ಕೆ ಇನ್ನೊಂದು ಪಾತ್ರಧಾರಿ ಕೊಡುವ ಉತ್ತರ 'ಸತ್ಯ. ಸೌಂದರ್ಯ ತುಂಬಿದ ಬಾಳು ಕಟ್ಟಿಕೊಂಡು ನನ್ನ ಜೀವನವೇ ಒಂದು ಮ್ಯಾಗ್ನಮ್ ಓಪನ್ ಆಗಬೇಕು ಎಂಬ ಆಸೆ ಇದೆ' ಎಂದು ಇನ್ನೊಂದು ಪಾತ್ರ ಹೇಳುತ್ತದೆ. ಇಂಥ ಮಾಗ್ನಮ್ ಓಪನ್ ಜೀವನ ಶಾರದಾ ಅವರಿಗೆ ದೊರಕದೇ ಇಂಥ ಕಾದಂಬರಿಯ ರಚನೆ ಸಾಧ್ಯವಿಲ್ಲ ಇಲ್ಲಿ ಕಲೆ, ಸಾಹಿತ್ಯ, ತರ್ಕಶಾಸ್ತ್ರ, ಮನಃಶಾಸ್ತ್ರ, ಮೀಮಾಂಸಾ ಶಾಸ್ತ್ರದ ಪ್ರಖರತೆ ಎಷ್ಟಿದೆ ಎಂದರೆ ಅದಕ್ಕೆ ಸೂಕ್ತ ಆವರಣವನ್ನು ಕಟ್ಟಲು ಬೇಕಾದ ಕಲ್ಪಿತ ಕಥಾಲೋಕವನ್ನು ಕಟ್ಟುವುದು ಎಂಥ ನುರಿತ ಕಾದಂಬರಿಗಾರನಿಗೂ ಸುಲಭ ಸಾಧ್ಯವಲ್ಲ, ಆದರೆ ಶಾರದಾ ಅವರು ತಮ್ಮ ಮೊದಲ ಕಾದಂಬರಿಯಲ್ಲಿ ಈ ನಿಟ್ಟಿನತ್ತ ದಾಪುಗಾಲು ಇಟ್ಟಿದ್ದಾರೆ. ಈ ಹೆಜ್ಜೆ ಕನ್ನಡ ಸಾರಸ್ವತ ಲೋಕದಲ್ಲಿ ಭದ್ರವಾಗಿ ನಿಲ್ಲಲಿ ಎಂದು ಆಶಿಸುತ್ತೇನೆ. - ಗುರುಪ್ರಾಸಾದ್‌ ಕಾಗಿನೆಲೆ

Variants (1)
  • Default Title — 355.00 INR — In stock

AI Readiness

Good foundation, but some important product data is still missing.

77%